• Feb 14, 2026
  • NPN Log
    ಸಾವು, ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ನಿರ್ಲಕ್ಷ್ಯದ ಚಾಲನೆಯಿಂದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ದುರ್ಮರಣಕ್ಕೀಡಾಗಿದ್ದರು. ಈ ಪ್ರಕರಣದಲ್ಲಿ ಜಾಹ್ನವಿ ಕುಟುಂಬಕ್ಕೆ 262 ಕೋಟಿ ರೂ. ದಾಖಲೆ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇದು ಅಮೆರಿಕ ಇತಿಹಾಸದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ನೀಡಿದ ಅತಿ ದೊಡ್ಡ ಪರಿಹಾರಗಳಲ್ಲಿ ಒಂದಾಗಿದ್ದು, ಈ ಆರ್ಥಿಕ ಇತ್ಯರ್ಥವು ಕುಟುಂಬಕ್ಕೆ ಒಂದಿಷ್ಟು ಸಾಂತ್ವನ ನೀಡುವ ನಿರೀಕ್ಷೆಯಿದೆ. ವಾಷಿಂಗ್ಟನ್, ಫೆಬ್ರವರಿ 12: ಅಮೆರಿಕದಲ್ಲಿ ನಡೆದ ಅಪಘಾತ(Accident)ದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ, ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದು. 2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಪೊಲೀಸ್ ಅಧಿಕಾರಿಯೊಬ್ಬರ ಕಾರು ಡಿಕ್ಕಿ ಹೊಡೆದು 23 ವರ್ಷದ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು. ಜಾಹ್ನವಿ ಕಂದುಲಾ ಭಾರತದವರಾಗಿದ್ದು, ಸಿಯಾಟಲ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಈ ಘಟನೆ ಜನವರಿ 2023 ರಲ್ಲಿ ನಡೆದಿತ್ತು. ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಮಾದಕವಸ್ತು ಸೇವನೆ ಮಾಡಿ, ಫೋನ್​​ ಅಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದರು. ಅವರು 25 mph ವೇಗದಲ್ಲಿ ಚಾಲನೆ ಮಾಡುವ ಪ್ರದೇಶದಲ್ಲಿ 74 mph (119 kph) ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ನಂತರ ಅಧಿಕಾರಿಗೆ ಅಜಾಗರೂಕ ಚಾಲನೆಗಾಗಿ 5,000 ಡಾಲರ್ ದಂಡ ವಿಧಿಸಲಾಯಿತು. ಅವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಯಿತು. ಆದಾಗ್ಯೂ, ಕಿಂಗ್ ಕೌಂಟಿ ಪ್ರಾಸಿಕ್ಯೂಟರ್‌ಗಳು ಅಧಿಕಾರಿ ಉದ್ದೇಶಪೂರ್ವಕವಾಗಿ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರ ವಿರುದ್ಧ ಯಾವುದೇ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊರಿಸಲಿಲ್ಲ. ಮತ್ತೊಬ್ಬರ ಬಾಡಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದ್ದ ದೃಶ್ಯಗಳು ಬೆಳಕಿಗೆ ಬಂದಾಗ ವಿಷಯ ತುಂಬಾ ಗಂಭೀರವಾಯಿತು. ಕಳೆದ ಶುಕ್ರವಾರ ಕಿಂಗ್ ಕೌಂಟಿ ಸುಪೀರಿಯರ್ ನ್ಯಾಯಾಲಯದಲ್ಲಿ ಇತ್ಯರ್ಥ ಅರ್ಜಿ ಸಲ್ಲಿಸಲಾಗಿದೆ. ಕುಟುಂಬದ ವಕೀಲರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಗರ ಅಟಾರ್ನಿ ಎರಿಕಾ ಇವಾನ್ಸ್ ಮಾತನಾಡಿ, ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಇತ್ಯರ್ಥವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಸಾಂತ್ವನ ನೀಡುತ್ತದೆ ಎಂದು ನಂಬಿದ್ದೇವೆಂದು ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion