• Feb 14, 2026
  • NPN Log
    ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕೆಂದು ಕನಸು ಕಾಣುತ್ತಿದ್ದು, ಈ ಸಂಬಂಧ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಮನವೊಲಿಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಆಪ್ತರು, ಡಿಕೆ ಶಿವಕುಮಾರ್ ಆಗೇ ಆಗುತ್ತಾರೆ ಎಂದು ವಿಶ್ವಾಸದಲ್ಲಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಹೊಸ ಕಾರು ಖರೀದಿಸಿದ್ದಾರೆ. ಹಾಗಾದ್ರೆ, ಐಷಾರಾಮಿ ಕಾರಿನ ಬೆಲೆ ಎಷ್ಟು? ಇದರ ವಿಶೇಷತೆ ಏನು ಎನ್ನುವುದನ್ನು ತಿಳಿಯಿರಿ. ಬೆಂಗಳೂರು, (ಫೆಬ್ರವರಿ 11): ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅರ್ಥಾತ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಲೆಕ್ಸಾಸ್ ಕಂಪನಿಯ ಹೊಸ ಐಷಾರಾಮಿ ಕಾರು ಖರೀದಿಸಿದ್ದು, ಡಿಕೆ ಶಿವಕುಮಾರ್, ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವಾಗಲೇ ಇತ್ತ ಎರಡು ಕೋಟಿ ರೂಪಾಯಿಯ ಹೊಸ Lexus LM 350h 7 ಸೀಟರ್ ಕಾರು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಬಂದಿದೆ. ಹೌದು..ಲೆಕ್ಸಾಸ್ ಕಂಪನಿಯ ಶೋರೂಮ್ ಸಿಬ್ಬಂದಿಯೇ ಇಂದು (ಫೆಬ್ರವರಿ 11) ಕಾರನ್ನು ಹೋಮ್ ಡೆಲಿವರಿ ಮಾಡಿದ್ದು, ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರು ಮನೆಗೆ ಬರಮಾಡಿಕೊಂಡಿದ್ದಾರೆ. 2.8 ಕೋಟಿ ಬೆಲೆಯ ಐಷಾರಾಮಿ ಕಾರು ಡಿಕೆ ಶಿವಕುಮಾರ್ ಅವರು 2.8 ಕೋಟಿ ರೂಪಾಯಿಯ Lexus LM 350h ಬಿಳಿ ಬಣ್ಣದ ಕಾರನ್ನು ಖರೀದಿಸಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿರುವುದರಿಂದ ಶೋರೂಮ್ ಸಿಬ್ಬಂದಿಯೇ ಹೋಂ ಡೆಲೆವರಿ ಮಾಡಿದ್ದಾರೆ. ಇನ್ನು KA 03 NZ 6666 ನಂಬರ್ ಪ್ಲೇಟ್ ಇರುವ ಏಳು ಸೀಟಿನ ಹೊಸ ಬ್ರಾಂಡ್ ನ್ಯೂ ಕಾರು ಇದಾಗಿದ್ದು, ದೀರ್ಘ ಪ್ರಯಾಣಕ್ಕೆ ಅತ್ಯುತ್ತಮ ಎಂದು ಗುರುತಿಸಿಕೊಂಡಿದೆ. ಅರಾಮಾದಾಯಕ ಪ್ರಯಾಣ, ಆಯಾಸ ರಹಿತ ಪ್ರಯಾಣಕ್ಕೆ ಈ ಕಾರು ಬಳಕೆ ಮಾಡಲಾಗುತ್ತದೆ. ಇದನ್ನೂ ನೋಡಿ: ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ ಡಿಕೆಶಿಯ ಹೊಸ ಲೆಕ್ಸಸ್ ಕಾರಿನ ವಿಶೇಷತೆ ಏನು? ಡಿಕೆಶಿ ಖರೀದಿಸಿದ ಹೊಸ LM 350h ಕಾರು 7 ಸೀಟರ್ ಕಾರು. ಇದರಲ್ಲಿ ನಾಲ್ಕು ಸೀಟಿನ ಆಯ್ಕೆ ಕೂಡ ಇದೆ. eCVT ಹಾಗೂ ಇ ಫೋರ್ ಆಲ್ ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿರುವ ಈ ಕಾರು 2.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಎಥೆನಾಲ್ ಇ20 ಇಂಧನ ಚಾಲಿತ ಎಂಜಿನ್ ಆಗಿದೆ.60 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಈ ಕಾರು ಬಳಕೆ ಮಾಡಿದ ಶೇಕಡಾ 93ರಷ್ಚು ಮಂದಿ ಇದರ ಕಂಫರ್ಟ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಶೇಕಡಾ 7ರಷ್ಟು ಮಂದಿ ಉತ್ತಮ ಎಂದಿದ್ದಾರೆ. 19 ಇಂಚಿನ ಅಲೋಯ್ ವ್ಹೀಲ್ಸ್, LED ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್, 23 ಸೌಂಡ್ ಸ್ಪೀಕಸ್ ಸಿಸ್ಟಮ್, ಏರ್‌ಬ್ಯಾಕ್, ಎಬಿಎಸ್, ಇಬಿಡಿ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಲೆಕ್ಸಸ್ LM 350h ಕಾರು ಬಳಸಿದ ಎರಡನೇ ರಾಜಕಾರಣಿ ಲೆಕ್ಸಸ್ LM 350h ಕಾರು ಖರೀದಿಸಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್‌ಗೂ ಮೊದಲು ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ತಮಿಳು ನಟ ವಿಜಯ್ ಜೊಸೆಫ್ ಈ ಕಾರು ಬಳಕೆ ಮಾಡುತ್ತಿದ್ದಾರೆ. ರಾಜಕೀಯ ಓಡಾಟ, ಪಕ್ಷ ಸಂಘಟನೆಗಳಿಗಾಗಿ ಈ ಕಾರನ್ನು ವಿಜಯ್ ಬಳಕೆ ಮಾಡುತ್ತಿದ್ದಾರೆ. ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಿ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ. ವಿಜಯ್ ಹೊರತುಪಡಿಸಿದರೆ ರಾಜಕಾರಣಿಗಳ ಪೈಕಿ ಡಿಕೆ ಶಿವಕುಮಾರ್ ಈ ಕಾರು ಖರೀದಿಸಿದ್ದಾರೆ. 7 ಸೆಲೆಬ್ರೆಟಿಗಳ ಬಳಿ ಇದೆ ಲೆಕ್ಸಸ್ LM 350h ಕಾರು ಲೆಕ್ಸಸ್ LM 350h ಕಾರನ್ನು ಭಾರತದಲ್ಲಿ ಕೆಲವೇ ಕೆಲವು ಮಂದಿ ಬಳಕೆ ಮಾಡುತ್ತಿದ್ದಾರೆ. ಅಂಬಾನಿ ಕುಟುಂಬದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಲೆಕ್ಸಸ್ LM 350h ಕೂಡ ಒಂದಾಗಿದೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಇದೇ ಲೆಕ್ಸಸ್ LM 350h ಕಾರು ಬಳಸುತ್ತಾರೆ. ಬಾಲಿವುಡ್ ಕೆಲ ಸೆಲೆಬ್ರೆಟಿಗಳು ಇದೇ ಲೆಕ್ಸಸ್ LM 350h ಕಾರು ಬಳಸುತ್ತಿದ್ದಾರೆ. ಈ ಪೈಕಿ ಶಾರುಖ್ ಖಾನ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್, ವಿಕ್ಕಿ ಕೌಶಾಲ್, ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಬಳಿ ಲೆಕ್ಸಸ್ LM 350h ಕಾರಿದೆ. ಇವರ ಸಾಲಿಗೆ ಈಗ ಡಿಕೆ ಶಿವಕುಮಾರ್ ಸೇರಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion