ಮಿಡ್–ಸ್ಮಾಲ್ ಕ್ಯಾಪ್ ಫಂಡ್ಗಳಿಗೆ ಹೂಡಿಕೆ ಶೇ. 23–24 ಕಡಿಮೆ!
Gold ETFs attract more investment, while Equity mutual funds see decline in inflows: ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಹರಿದುಬರುವ ಹೂಡಿಕೆಗಳು ಜನವರಿಯಲ್ಲಿ ಕಡಿಮೆ ಆಗಿವೆ. 2025ರ ಡಿಸೆಂಬರ್ನಲ್ಲಿ ಈಕ್ವಿಟಿ ಫಂಡ್ಗಳಿಗೆ 28,054 ಕೋಟಿ ರೂ ಹೂಡಿಕೆ ಹೋಗಿತ್ತು. 2026ರ ಜನವರಿಯಲ್ಲಿ 24,029 ಕೋಟಿ ರೂ ಹೂಡಿಕೆ ಬಂದಿದೆ. ಇದೇ ವೇಳೆ, ಗೋಲ್ಡ್ ಇಟಿಎಫ್ಗಳಲ್ಲಿ ನಿವ್ವಳ ಒಳ ಹರಿವಿನಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ.
ವರಿ 10: ಸತತ ಎರಡನೇ ತಿಂಗಳು ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ (Equity Mutual Funds) ಹೂಡಿಕೆಗಳ ಒಳಹರಿವು ಕಡಿಮೆ ಆಗಿದೆ. ಭಾರತೀಯ ಮ್ಯೂಚುವಲ್ ಫಂಡ್ಗಳ ಸಂಘಟನೆಯಾದ ಎಎಂಎಫ್ಐ ನೀಡಿರುವ ಮಾಹಿತಿ ಪ್ರಕಾರ ಜನವರಿ ತಿಂಗಳಲ್ಲಿ 24,029 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳು ಈಕ್ವಿಟಿ ಫಂಡ್ಗಳಿಗೆ ಬಂದಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಈಕ್ವಿಟಿ ಫಂಡ್ಗಳಿಗೆ ಸಿಕ್ಕ ಫಂಡ್ನಲ್ಲಿ ಶೇ. 14 ಇಳಿಕೆ ಆಗಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈಕ್ವಿಟಿ ಫಂಡ್ಗಳು 28,054 ಕೋಟಿ ರೂ ಹೂಡಿಕೆಯನ್ನು ಆಕರ್ಷಿಸಿದ್ದವು.
ಇನ್ನು, 2025ರ ಜನವರಿಯಲ್ಲಿ ಈ ಫಂಡ್ಗಳಿಗೆ ಹರಿದುಬಂದಿದ್ದ ಹೂಡಿಕೆಯ ಒಟ್ಟು ಮೊತ್ತ 39,687 ಕೋಟಿ ರೂ. ಇದಕ್ಕೆ ಹೋಲಿಸಿದರೆ 2026ರ ಜನವರಿಯಲ್ಲಿ ಹರಿದುಬಂದ ಹೂಡಿಕೆಯಲ್ಲಿ ಬರೋಬ್ಬರಿ ಶೇ. 39ರಷ್ಟು ಕಡಿಮೆ ಆಗಿದೆ.
ಈಕ್ವಿಟಿ ಫಂಡ್ಗಳ ಪೈಕಿ ಮಿಡ್ ಕ್ಯಾಪ್ ಫಂಡ್ಗಳು, ಸ್ಮಾಲ್ ಕ್ಯಾಪ್ ಫಂಡ್ಗಳಿಗೆ ಬರುವ ಹೂಡಿಕೆ ಒಳಹರಿವಿಲ್ಲಿ ಶೇ. 23-24ರಷ್ಟು ಕಡಿಮೆ ಆಗಿದೆ. ಇಎಲ್ಎಸ್ಎಸ್ ಫಂಡ್ಗಳಿಂದ 593 ಕೋಟಿ ರೂ ಹೊರಹರಿವು ಆಗಿದೆ.
ಲಾರ್ಜ್ ಕ್ಯಾಪ್ ಫಂಡ್ಗಳು, ಫ್ಲೆಕ್ಸಿ ಕ್ಯಾಪ್ ಫಂಡ್ಗಳು, ಫೋಕಸ್ಡ್ ಫಂಡ್ಗಳು ಬೇಡಿಕೆ ಉಳಿಸಿಕೊಂಡಿವೆ.
ಗೋಲ್ಡ್ ಇಟಿಎಫ್ಗಳಿಗೆ ಹೆಚ್ಚಿದ ಹೂಡಿಕೆ
ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಜನವರಿಯಲ್ಲಿ ಬೇಡಿಕೆ ತಗ್ಗಿರುವ ಹೊತ್ತಲ್ಲೇ ಗೋಲ್ಡ್ ಇಟಿಎಫ್ಗಳಿಗೆ (Gold ETFs) ಹೂಡಿಕೆಗಳು ಮುಗಿಬಿದ್ದು ಹೋಗುತ್ತಿವೆ. ಕಳೆದ 1-2 ವರ್ಷದಲ್ಲಿ ಸಿಕ್ಕಾಪಟ್ಟೆ ಬೆಳೆದಿರುವ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರು ಗೋಲ್ಡ್ ಇಟಿಎಫ್ ಮತ್ತು ಸಿಲ್ವರ್ ಇಟಿಎಫ್ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಎಎಂಎಫ್ಐ ರಿಪೋರ್ಟ್ ಪ್ರಕಾರ ಜನವರಿಯಲ್ಲಿ ನಿವ್ವಳ ಒಳ ಹರಿವು 24,040 ಕೋಟಿ ರೂ ದಅಖಲಾಗಿದೆ. ಡಿಸೆಂಬರ್ನಲ್ಲಿ ದಾಖಲಾಗಿರುವುದಕ್ಕೆ ಹೋಲಿಸಿದರೆ ಜನವರಿಯಲ್ಲಿ ಎರಡು ಪಟ್ಟು ಹೆಚ್ಚಿದೆ.














Comments