• Feb 14, 2026
  • NPN Log
    ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಶಿಕ್ಷಕರಿಗೆ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಗೌರವವನ್ನು ಭಾರತದ ರೂಬಲ್ ನಾಗಿ (Rouble Nagi) ಅವರು ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಫೆಬ್ರವರಿ 5 ರಂದು ದುಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೂಬಲ್ ನಾಗಿ 5,000ಕ್ಕೂ ಅಧಿಕ ಸಾಧಕರ ನಡುವೆ ಅತ್ಯುತ್ತಮ ಶಿಕ್ಷಕರಾಗಿ ಆಯ್ಕೆಯಾಗಿದ್ದು, ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಡಾಲರ್ (ಸುಮಾರು 8.3 ಕೋಟಿ ರೂ.) ಬಹುಮಾನವನ್ನು ಗೆದ್ದಿದ್ದಾರೆ. ಆದ್ದರಿಂದ ರೂಬಲ್ ನಾಗಿ ಯಾರು?, ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ರೂಬಲ್ ನಾಗಿ ಅವರು ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡಲಾಗುವ ವಿಶ್ವದ ಪ್ರತಿಷ್ಠಿತ GEMS Education Global Teacher Prize ಪ್ರಶಸ್ತಿಯನ್ನು ಅವರು ಫೆ.05ರಂದು ಪಡೆದಿದ್ದು, ಜೊತೆಗೆ ಸುಮಾರು 1 ಮಿಲಿಯನ್ ಡಾಲರ್ (8 ಕೋಟಿ ರೂ.) ಬಹುಮಾನವನ್ನು ಗೆದ್ದಿದ್ದಾರೆ. ದುಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ನಾಮನಿರ್ದೇಶಿತರ ನಡುವೆ ಅತ್ಯುತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿರುವುದು ಅವರ ಸಮಾಜಮುಖಿ ಸೇವೆಗೆ ದೊರೆತ ದೊಡ್ಡ ಗೌರವವಾಗಿದೆ. ರೂಬಲ್ ನಾಗಿ (Rouble Nagi) ಯಾರು? ರೂಬಲ್ ನಾಗಿ ಕೇವಲ ಶಿಕ್ಷಕಿಯಲ್ಲ, ಒಬ್ಬ ಶಿಲ್ಪಕಲಾವಿದೆ ಮತ್ತು ಸಮಾಜ ಸೇವಕಿ. ಅವರು ಸ್ಥಾಪಿಸಿದ Rouble Nagi Art Foundation ಮೂಲಕ ಉತ್ತರ ಪ್ರದೇಶದ ಕೊಳೆಗೇರಿ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಶಿಕ್ಷಣದಿಂದ ದೂರ ಉಳಿದ ಬಡ ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸಲು ಅವರು ಗೋಡೆಗಳನ್ನೇ ತರಗತಿ ಕೊಠಡಿಗಳಾಗಿ ಪರಿವರ್ತಿಸಿದ್ದಾರೆ. ಸ್ಮಮ್ ಪ್ರದೇಶಗಳ ಗೋಡೆಗಳ ಮೇಲೆ ಅಕ್ಷರಮಾಲೆ, ಗಣಿತ, ವಿಜ್ಞಾನ ಮತ್ತು ಇತಿಹಾಸದ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ಆಟವಾಡುತ್ತಲೇ ಕಲಿಯುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಬೀದಿಬದಿಯ ಗೋಡೆಗಳನ್ನು ಬೋಧನಾ ಮಾಧ್ಯಮವಾಗಿ ಪರಿವರ್ತಿಸಿದ್ದು, ಈ ಹೊಸ ಪ್ರಯೋಗವು ಸಾವಿರಾರು ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತಂದಿದೆ. ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ಖಷಿಯಲ್ಲಿ ರೂಬಲ್ ನಾಗಿ ಹಂಚಿಕೊಂಡ ಪೋಸ್ಟ್​: ಇದುವರೆಗೆ ದೇಶಾದ್ಯಂತ 800ಕ್ಕೂ ಹೆಚ್ಚು ಕಲಿಕೆ ಕೇಂದ್ರಗಳನ್ನು ಸ್ಥಾಪಿಸಿರುವ ರೂಬಲ್ ನಾಗಿ, ಶಿಕ್ಷಣವನ್ನು ಹಕ್ಕು ಎಂದು ಪರಿಗಣಿಸಿ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಜ್ಞಾನ ನೀಡುತ್ತಿದ್ದಾರೆ. ಅವರ ಪ್ರಯತ್ನದಿಂದ ಅನೇಕ ಮಕ್ಕಳ ಬದುಕು ಬದಲಾಗಿದ್ದು, ಆತ್ಮವಿಶ್ವಾಸ ಮತ್ತು ಹೊಸ ಭವಿಷ್ಯ ದೊರಕಿದೆ. ಕಲೆಯ ಮೂಲಕ ಶಿಕ್ಷಣವನ್ನು ತಲುಪಿಸುವ ಈ ವಿಭಿನ್ನ ಕಾರ್ಯಶೈಲಿಯೇ ಅವರಿಗೆ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ತಂದುಕೊಟ್ಟಿದೆ. ರೂಬಲ್ ನಾಗಿಯ ಸಾಧನೆ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಿದ್ದು, ಒಬ್ಬ ವ್ಯಕ್ತಿಯ ಸೇವಾಭಾವ ಸಮಾಜವನ್ನೇ ಬದಲಾಯಿಸಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion