• Feb 14, 2026
  • NPN Log
    Aamir Khan: ಒಟಿಟಿಗಳ ಬಗ್ಗೆ ಮೊದಲಿನಿಂದಲೂ ವಿರೋಧ ಅಭಿಪ್ರಾಯವನ್ನೇ ಹೊಂದಿರುವ ಆಮಿರ್ ಖಾನ್, ಇದೀಗ ಭಾರತೀಯ ಸಿನಿಮಾಗಳು ಹೆಚ್ಚು ಲಾಭ ಗಳಿಸದಿರಲು ಕಾರಣ ಏನು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಈ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಿಲ್ಲ. ಆಮಿರ್ ಖಾನ್ ಹೇಳಿರುವುದೇನು? ಆಮಿರ್ ಖಾನ್ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು? ಭಾರತೀಯ ಚಿತ್ರರಂಗದಲ್ಲಿ (Indian Cinema) ಸಿನಿಮಾವನ್ನೇ ಉಸಿರಾಡುವ ಕೆಲವೇ ಕೆಲವು ಸಿನಿಮಾ ಕರ್ಮಿಗಳಲ್ಲಿ ಆಮೀರ್ ಖಾನ್ ಸಹ ಒಬ್ಬರು. ಒಳ್ಳೆಯ ಸಿನಿಮಾಗಳನ್ನು ಮಾಡುವುದರ ಜೊತೆಗೆ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕುರಿತಾಗಿ, ಸಿನಿಮಾ ಮಂದಿ ಹೆಚ್ಚು ಲಾಭ ಮಾಡುವುದರ ಕುರಿತಾಗಿ ಒಂದಿಲ್ಲೊಂದು ಯೋಜನೆ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಅವರು ತಾವೇ ನಟಿಸಿ, ನಿರ್ಮಾಣ ಮಾಡಿದ್ದ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಯ ಬದಲಿಗೆ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರಯೋಗ ಮಾಡಿದರು. ಒಟಿಟಿಗಳ ಬಗ್ಗೆ ಮೊದಲಿನಿಂದಲೂ ವಿರೋಧ ಅಭಿಪ್ರಾಯವನ್ನೇ ಹೊಂದಿರುವ ಆಮಿರ್ ಖಾನ್, ಇದೀಗ ಭಾರತೀಯ ಸಿನಿಮಾಗಳು ಹೆಚ್ಚು ಲಾಭ ಗಳಿಸದಿರಲು ಕಾರಣ ಏನು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಈ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್, ‘ಭಾರತದಲ್ಲಿ ಸುಮಾರು 9,000 ರಿಂದ 10,000 ಚಿತ್ರಮಂದಿರಗಳು ಮಾತ್ರವೇ ಇವೆ. ಭಾರತದಂಥಹಾ ಭಾರಿ ಜನಸಂಖ್ಯೆಯ ದೇಶಕ್ಕೆ ಇದು ಬಹಳ ಕಡಿಮೆ. ಚೀನಾದಲ್ಲಿ ಸುಮಾರು ಒಂದು ಲಕ್ಷದಷ್ಟು ಚಿತ್ರಮಂದಿರಗಳು ಇವೆ. ಅಮೆರಿಕದಲ್ಲೂ ಸಹ ಚಿತ್ರಮಂದಿರಗಳ ಸಂಖ್ಯೆ ಬಹಳ ಹೆಚ್ಚಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಚಿತ್ರಮಂದಿರಗಳಿಲ್ಲ. ಚೀನಾದಲ್ಲಿ ಒಂದು ಸಿನಿಮಾ ಬಿಡುಗಡೆಯಾದಾಗ ಅಲ್ಲಿನ ಮೂಲಸೌಕರ್ಯದ ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ’ ಎಂದು ಆಮೀರ್ ಖಾನ್ ಹೇಳಿದ್ದಾರೆ. ‘ಧುರಂಧರ್’ ಸಿನಿಮಾದ ಉದಾಹರಣೆ ನೀಡಿರುವ ಆಮಿರ್ ಖಾನ್, ‘ಧುರಂಧರ್’ ಸಿನಿಮಾ 5,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿ 1,000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಒಂದು ವೇಳೆ ನಮ್ಮಲ್ಲಿ 15,000 ಸ್ಕ್ರೀನ್‌ಗಳು ಲಭ್ಯವಿದ್ದಿದ್ದರೆ, ಈ ಸಿನಿಮಾದ ಗಳಿಕೆ ಇನ್ನೂ ಎಷ್ಟು ಪಟ್ಟು ಹೆಚ್ಚಾಗುತ್ತಿತ್ತು ಎಂದು ಊಹಿಸಿ. ಹಳ್ಳಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇಂದಿಗೂ ಒಂದೂ ಚಿತ್ರಮಂದಿರ ಇಲ್ಲದ ಪ್ರದೇಶಗಳಿವೆ’ ಎಂದಿದ್ದಾರೆ ಆಮಿರ್ ಖಾನ್. ಮುಂದುವರೆದು ಮಾತನಾಡಿರುವ ಆಮಿರ್ ಖಾನ್, ‘ಕೇವಲ 2 ಪರ್ಸೆಂಟ್ ರಷ್ಟು ಭಾರತೀಯರು ಮಾತ್ರ ದೊಡ್ಡ ಹಿಟ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡುತ್ತಾರೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದ ಅವರು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಸಿನಿಮಾ ಉದ್ಯಮವು ತಳಮಟ್ಟದಲ್ಲಿ ಬೆಳೆಯಲು ಸಾಧ್ಯ ಮತ್ತು ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ. ಚಿತ್ರಮಂದಿರಗಳ ನಿರ್ಮಾಣವನ್ನು ಮೂಲಸೌಕರ್ಯದಂತೆ ಪರಿಗಣಿಸಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ. ಆಮಿರ್ ಖಾನ್ ಅಭಿಪ್ರಾಯಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಆಮಿರ್ ಖಾನ್ ಯೋಜನೆ ಅದ್ಭುತ ಎಂದರೆ ಇನ್ನು ಕೆಲವರು ಇದು ಅಸಾಧ್ಯ ಎಂದಿದ್ದಾರೆ. 15 ಸಾವಿರ ಚಿತ್ರಮಂದಿರಗಳಿಗೆ ಸಾಕಾಗುವಷ್ಟು ಒಳ್ಳೆಯ ಸಿನಿಮಾಗಳು ಭಾರತದಲ್ಲಿ ನಿರ್ಮಾಣ ಆಗುತ್ತಿಲ್ಲ ಎಂದು ಕೆಲವರು ಹೇಳಿದರು. 15000 ಚಿತ್ರಮಂದಿರ ನಿರ್ಮಾಣ ಮಾಡಲು ಭಾರಿ ಮೊತ್ತದ ಹಣ, ಸ್ಥಳ ಬೇಕಾಗುತ್ತದೆ. ಅಷ್ಟು ಹೂಡಿಕೆ ಮಾಡಿ ಲಾಭಕ್ಕಾಗಿ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ’ ಎಂದಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion