• Feb 14, 2026
  • NPN Log
    Dr. Yampolskiy Warns 99% Job Loss! Future of Work in AI Era: ಆರ್ಟಿಫಿಶಿಯಲ್ ಜನರೇಟಿವ್ ಇಂಟೆಲಿಜೆನ್ಸ್ 2027ಕ್ಕೆ ಆಗಮಿಸಬಹುದು. ಅದು ಬಂದು ಬಿಟ್ಟರೆ ಮನುಷ್ಯರ ಬಹುತೇಕ ಕೆಲಸಗಳನ್ನು ಯಂತ್ರಗಳೇ ಮಾಡಬಲ್ಲುವು ಎಂದು ಲೂಯಿಸ್​ವಿಲೆ ಯೂನಿವರ್ಸಿಟಿಯ ವಿಜ್ಞಾನಿ ಡಾ. ರೋಮನ್ ಯಾಂಪೋಲ್​ಸ್ಕಿ ಭವಿಷ್ಯ ನುಡಿದಿದ್ದಾರೆ. ಈಗಿರುವ ಎಐ ಸಾಧನಗಳಿಂದಲೇ ಶೇ. 60ರಷ್ಟು ಮನುಷ್ಯರ ಕೆಲಸಗಳನ್ನು ಮಾಡಬಹುದು. ಎಜಿಐನಿಂದ ಶೇ. 99 ಕೆಲಸ ಮಾಡಲು ಸಾಧ್ಯ ಎಂದಿದ್ದಾರೆ. ನವದೆಹಲಿ, ಫೆಬ್ರುವರಿ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಟೆಕ್ನಾಲಜಿಯ ಮುಂದುವರಿದ ಭಾಗವಾಗಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅಥವಾ ಎಜಿಐ ಅನ್ನು ಸಾಧಿಸಲು ವಿಜ್ಞಾನಿಗಳು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ಎಜಿಐ ಸಿದ್ಧವಾಯಿತೆಂದರೆ ಯಂತ್ರದ ಬುದ್ಧಿಮತ್ತೆಯು ಮನುಷ್ಯರನ್ನು ಮೀರಿ ಹೆಚ್ಚುತ್ತದೆ. ಮನುಷ್ಯರ ಬಹುತೇಕ ಎಲ್ಲಾ ಕೆಲಸಗಳನ್ನೂ ಯಂತ್ರಗಳು ಮಾಡಬಲ್ಲುವು. ಆದರೆ, ಇಂಥದ್ದೊಂದು ಸ್ಥಿತಿ ಯಾವಾಗ ಬರುತ್ತೆ? ಅಮೆರಿಕದ ಲೂಯಿಸ್​ವಿಲೆ ಯೂನಿವರ್ಸಿಟಿಯ ಪ್ರೊಫೆಸರ್ ಹಾಗೂ ಕಂಪ್ಯೂಟರ್ ವಿಜ್ಞಾನಿ ಡಾ. ರೋಮನ್ ಯಾಂಪೋಲ್​ಸ್ಕಿ (Dr. Roman Yampolskiy) ಅವರ ಪ್ರಕಾರ ಮುಂದಿನ ವರ್ಷವೇ ಎಜಿಐ ಬಂದುಬಿಡಬಹುದು. ದಿ ಡೈರಿ ಆಫ್ ಎ ಸಿಇಒ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಡಾ. ಯಾಂಪೋಲ್​ಸ್ಕಿ ಅವರು, 2027ರಲ್ಲೇ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಆಗಮನ ಆಗಬಹುದು. ಎಲ್ಲಾ ಉದ್ಯಮಗಳಲ್ಲೂ ಸಾಲು ಸಾಲಾಗಿ ಉದ್ಯೋಗಗಳು ಇನ್ನಿಲ್ಲದಂತಾಗಬಹುದು ಎನ್ನುವ ಭಯಾನಕ ಸಂಗತಿಯನ್ನು ಈ ಕಂಪ್ಯೂಟರ್ ವಿಜ್ಞಾನಿ ತಿಳಿಸಿದ್ದಾರೆ. ಈಗಿರುವ ಸಾಮಾನ್ಯ ಎಐ ಮಾಡಲ್​ಗಳೇ ಈಗಿರುವ ಮನುಷ್ಯರ ಶೇ. 60ರಷ್ಟು ಕೆಲಸಗಳನ್ನು ಮಾಡಬಲ್ಲುವು. ಮನುಷ್ಯರಿಗೆ ಮಾಡಲು ಸಾಧ್ಯವಿರುವ ಪ್ರತಿಯೊಂದು ಕೆಲಸವನ್ನೂ ಎಜಿಐ ಮಾಡಬಲ್ಲುದು. ಎಜಿಐ ಅಡಿ ಇಟ್ಟ ಬಳಿಕ ಐದು ವರ್ಷದಲ್ಲಿ ಶೇ. 99ರಷ್ಟು ಕೆಲಸಗಳೇ ಇಲ್ಲವಾಗುತ್ತವಂತೆ. ಡಾ. ರೋಮನ್ ಯಾಂಪೋಲ್ಸ್​ಕಿ ಅವರು ಎಐ ಸುರಕ್ಷತೆ ಮತ್ತು ಅಪಾಯದ ಕುರಿತು 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದು ಮುದ್ರಿಸಿದ್ದಾರೆ. ಅವರ ಪ್ರಕಾರ, ಆಟೊಮೇಶನ್ ಸಾಧ್ಯವೇ ಇಲ್ಲದ ವೃತ್ತಿ ಯಾವುದೂ ಇಲ್ಲ. ಈ ಹಿಂದೆ ತಂತ್ರಜ್ಞಾನ ಆವಿಷ್ಕಾರಗಳ ಅಳವಡಿಕೆಗೆ ಮನುಷ್ಯರ ನೆರವು ಬೇಕಾಗಿತ್ತು. ಆದರೆ, ಈಗ ಎಐ ಸ್ವತಂತ್ರವಾಗಿ ಆಪರೇಟ್ ಮಾಡಲು ಸಮರ್ಥವಾಗಿದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಬಹಳ ದಟ್ಟವಾಗಿದೆ ಎನ್ನುವುದು ಇವರ ಅನಿಸಿಕೆ. ಕಂಪ್ಯೂಟರ್ ಆಧಾರಿತ ಉದ್ಯೋಗಗಳು ಮೊದಲು ನಶಿಸುತ್ತವೆ. ಕಾರ್ಮಿಕರ ಕೆಲಸಗಳು ಹೋಗುತ್ತವೆ. 2030ರೊಳಗೆ ಮನುಷ್ಯರ ಬಹುತೇಕ ಎಲ್ಲಾ ದೈಹಿಕ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆಯಂತೆ. ಈ ಕೆಲ ಕೆಲಸಗಳು ಉಳಿದುಕೊಳ್ಳಬಹುದು ಡಾ. ರೋಮನ್ ಯಾಂಪೋಲ್​ಸ್ಕಿ ಪ್ರಕಾರ ಎಜಿಐ ಆರ್ಭಟದ ಮಧ್ಯೆ ಮನುಷ್ಯರಿಗೆ ಕೆಲ ಕೆಲಸಗಳು ಉಳಿದುಕೊಳ್ಳಬಹುದು. ಶ್ರೀಮಂತರಿಗೆ ಸಹಾಯಕರು ಬೇಕಾಗಬಹುದು; ವೈಯಕ್ತಿಕ ಕಾಳಜಿ, ಆರೈಕೆ ಬಯಸುವ ಕೆಲಸಗಳು; ಎಐ ಸಿಸ್ಟಂಗಳನ್ನು ಗಮನಿಸಬಲ್ಲ ತಜ್ಞರು; ಕಂಪನಿಗಳಿಗೆ ಎಐ ಅಳವಡಿಕೆ ಮಾಡಲು ನೆರವಾಗುವ ತಜ್ಞರು, ಈ ಕೆಲಸಗಳು ಮಾತ್ರ ಚಾಲನೆಯಲ್ಲಿ ಇರಬಹುದು ಎಂದು ಯಾಂಪೋಲ್​ಸ್ಕಿ ಭಯಾನಕ ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಇಲ್ಲವೆಂದರೆ ಮನುಷ್ಯರಿಗೆ ಹಣ ಎಲ್ಲಿಂದ? ಪ್ರತಿಯೊಂದು ಕೆಲಸವನ್ನೂ ಯಂತ್ರಗಳೇ ಮಾಡುವುದರಿಂದ ಮನುಷ್ಯರಿಗೆ ಕೆಲಸ ಇರಲ್ಲ. ಜೊತೆಗೆ ಉತ್ಪಾದನೆಯೂ ಕೂಡ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ. ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರೊಡಕ್ಟಿವಿಟಿ ಇರುತ್ತದೆ. ಇದರ ಫಲ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದರೆ ಯಾರಿಗೂ ಕೂಡ ಯಾವುದರ ಕೊರತೆಯಾಗದು. ವಿಶ್ವದಲ್ಲಿ ಯೂನಿವರ್ಸಲ್ ಬೇಸಿಕ್ ಇನ್ಕಮ್​ನಂತಹ ವ್ಯವಸ್ಥೆ ಬರಬಹುದು. ಇಲಾನ್ ಮಸ್ಕ್ ಅವರು ಬಾರಿ ಬಾರಿ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion