• Feb 14, 2026
  • NPN Log
    Nick Jonas: ನಿಕ್ ಜೋನಸ್ ಭಾರತದ ಅಳಿಯ ಸಹ ಹೌದು, ಪ್ರಿಯಾಂಕಾ ಚೋಪ್ರಾ ಪತಿಯಾಗಿರುವ ನಿಕ್ ಜೋನಸ್, ಭಾರತದೊಂದಿಗೆ ಹತ್ತಿರದ ಬಂಧ ಹೊಮದಿದ್ದಾರೆ. ನಟಿ ಪ್ರಿಯಾಂಕಾ, ನಿಕ್ ಜೋನಸ್​​ಗೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಬಗ್ಗೆ ಕಲಿಸಿಕೊಟ್ಟಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಭಾರತ ಮತ್ತು ವಿಶೇಷವಾಗಿ ಹಿಂದೂ ಧರ್ಮದ ಬಗ್ಗೆ ನಿಕ್ ಜೋನಸ್ ಮಾತನಾಡಿದ್ದಾರೆ, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವನ್ನು ಅವರು ವ್ಯಕ್ತಪಡಿಸಿದ್ದಾರೆ. ನಿಕ್ ಜೋನಸ್ (Nick Jonas), ಹಾಲಿವುಡ್​ನ (Hollywood) ಖ್ಯಾತ ಪಾಪ್ ಗಾಯಕ ಮತ್ತು ನಟ. ನಿಕ್ ಜೋನಸ್ ಭಾರತದ ಅಳಿಯ ಸಹ ಹೌದು, ಪ್ರಿಯಾಂಕಾ ಚೋಪ್ರಾ ಪತಿಯಾಗಿರುವ ನಿಕ್ ಜೋನಸ್, ಭಾರತದೊಂದಿಗೆ ಹತ್ತಿರದ ಬಂಧ ಹೊಮದಿದ್ದಾರೆ. ನಟಿ ಪ್ರಿಯಾಂಕಾ, ನಿಕ್ ಜೋನಸ್​​ಗೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಬಗ್ಗೆ ಕಲಿಸಿಕೊಟ್ಟಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಭಾರತ ಮತ್ತು ವಿಶೇಷವಾಗಿ ಹಿಂದೂ ಧರ್ಮದ ಬಗ್ಗೆ ನಿಕ್ ಜೋನಸ್ ಮಾತನಾಡಿದ್ದಾರೆ, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವನ್ನು ಅವರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಸ್ಯಾಚ್ ಸಂಗ್ ಶೋ’ನಲ್ಲಿ (Zach Sang Show) ಮಾತನಾಡಿರುವ ನಿಕ್ ಜೋನಸ್, ‘ನಾನು ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಕಲಿಯುತ್ತಿದ್ದೇನೆ. ಹಿಂದೂ ಧರ್ಮ ನಿಜಕ್ಕೂ ಅದ್ಭುತವಾಗಿದೆ. ವಿಶೇಷವಾಗಿ ಹಿಂದೂ ಧರ್ಮದ ಕರ್ಮದ ಸಿದ್ಧಾಂತ ನನ್ನನ್ನು ಹೆಚ್ಚು ಪ್ರಭಾವಿಸಿದೆ. ನಾವು ಇತರರಿಗೆ ಒಳ್ಳೆಯದನ್ನು ಮಾಡಿದರೆ ಅದು ನಮಗೆ ಮರಳಿ ಬರುತ್ತದೆ, ಕೆಟ್ಟದು ಮಾಡಿದರೆ ನಮಗೆ ಕೆಟ್ಟದು ಆಗುತ್ತದೆ ಎಂಬ ತತ್ವವು ನನಗೆ ತುಂಬಾ ಇಷ್ಟ’ ಎಂದಿದ್ದಾರೆ. ಜೊತೆಗೆ ಅಲ್ಲದೆ ಭಾರತದ ಹಬ್ಬಗಳು ಮತ್ತು ಸಂಪ್ರದಾಯಗಳು ಈಗ ತಮ್ಮ ಮನೆಯ ಅವಿಭಾಜ್ಯ ಅಂಗವಾಗಿವೆ, ನಾನು ಭಾರತೀಯ ಹಬ್ಬಗಳನ್ನು ಬಹಳ ಇಷ್ಟಪಟ್ಟು ಆಚರಿಸುತ್ತೇನೆ’ ಎಂದಿದ್ದಾರೆ ನಿಕ್. ತಮ್ಮ ಪುತ್ರಿ ಮಾಲತಿ ಮೇರಿ ಅವರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಧರ್ಮಗಳ ಸಮನ್ವಯದೊಂದಿಗೆ ಬೆಳೆಸುತ್ತಿರುವುದಾಗಿ ನಿಕ್ ತಿಳಿಸಿದ್ದಾರೆ. ‘ನಮ್ಮ ಮಗಳು ಹಿಂದೂ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಅರ್ಥಪೂರ್ಣ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ. ಬಹುಸಂಸ್ಕೃತಿಯ ಕುಟುಂಬವನ್ನು ಹೊಂದಿರುವುದು ನನ್ನ ಸೌಭಾಗ್ಯ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಿಕ್ ಜೋನಸ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ನೆಟ್ಟಿಗರು ನಿಕ್ ಜೋನಸ್ ಅನ್ನು ‘ರಾಷ್ಟ್ರೀಯ ಅಳಿಯ’ ಎಂದು ಕರೆಯುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ನಿಕ್ ಜೋನಾಸ್ ಅವರು ಪತ್ನಿಯ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನಿಕ್ ಸಹ ಲೈವ್ ಕಾನ್ಸರ್ಟ್, ಹೊಸ ಆಲ್ಬಂ ಮತ್ತು ಸಿನಿಮಾ ನಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು 2018ರಲ್ಲಿ ವಿವಾಹವಾದರು. ನಿಕ್ ಜೋನಸ್, ಪ್ರಿಯಾಂಕಾ ಅವರಿಗಿಂತಲೂ ವಯಸ್ಸಿನಲ್ಲಿ 10 ವರ್ಷ ಚಿಕ್ಕವರು. ಈ ವಯಸ್ಸಿನ ಅಂತರದ ಕಾರಣಕ್ಕೆ ಆರಂಭದಲ್ಲಿ ಈ ಜೋಡಿ ಟ್ರೋಲ್​​ಗೆ ಒಳಗಾಗಿತ್ತು. ಅಲ್ಲದೆ, ಇವರ ಅದ್ಧೂರಿ ವಿವಾಹ ಭಾರತದಲ್ಲಿ ಭಾರತೀಯ ಸಂಸ್ಕೃತಿಯಂತೆ ನಡೆದಿತ್ತು. ಆಗಲೂ ಸಹ ಇದನ್ನು ಪಿಆರ್ ಸ್ಟಂಟ್ ಎಂದೆಲ್ಲ ಕರೆಯಲಾಗಿತ್ತು. ಆದರೆ ಮದುವೆಯಾಗಿ ಇಷ್ಟು ವರ್ಷಗಳ ಬಳಿಕವೂ ಈ ಜೋಡಿ ಖುಷಿಯಾಗಿ ಒಟ್ಟಿಗೆ ಇದ್ದಾರೆ. ಇಬ್ಬರಿಗೂ ಮಾಲತಿ ಹೆಸರಿನ ಮುದ್ದಾದ ಮಗಳು ಸಹ ಇದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion