• Feb 14, 2026
  • NPN Log
    ನಾವು ಅನುಕೂಲಕರವೆಂದು ಬದಲಾಯಿಸಿಕೊಂಡ ಎಷ್ಟೋ ಅಭ್ಯಾಸಗಳು ನಿಧಾನವಾಗಿ ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಹೌದು, ಹಿಂದೆ ಪ್ರತಿ ಮನೆಯಲ್ಲೂ ಇಂಡಿಯನ್ ಟಾಯ್ಲೆಟ್ ಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ಪಾಶ್ಚಿಮಾತ್ಯ ಕಮೋಡ್‌ ಅಥವಾ ವೆಸ್ಟರ್ನ್ ಟಾಯ್ಲೆಟ್ ಗಳನ್ನು ಎಲ್ಲರೂ ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದ್ದಾರೆ. ಈ ಬದಲಾವಣೆ ಅನುಕೂಲಕರವಾಗಿದ್ದರೂ ಕೂಡ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆಯೇ ಎಂಬ ಅನುಮಾನ ಹೆಚ್ಚಿನವರಲ್ಲಿ ಕಾಡುತ್ತಿದೆ. ಹಾಗಾದರೆ ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ಎಲ್ಲಾ ರೀತಿಯ ಅಭ್ಯಾಸಗಳನ್ನು ಬದಲಿಸುತ್ತಿದೆ. ಅಷ್ಟೇಅಲ್ಲ ಮನೆ, ನಾವು ಬಳಸುವ ವಸ್ತುಗಳು ಜೊತೆಗೆ ಶೌಚಾಲಯಗಳು ಕೂಡ ಬದಲಾಗುತ್ತಿದೆ. ಹಿಂದೆ ಪ್ರತಿ ಮನೆಯಲ್ಲೂ ಇಂಡಿಯನ್ ಟಾಯ್ಲೆಟ್ (Indian toilet) ಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ಪಾಶ್ಚಿಮಾತ್ಯ ಕಮೋಡ್‌ ಅಥವಾ ವೆಸ್ಟರ್ನ್ ಟಾಯ್ಲೆಟ್ (Western Toilet) ಗಳನ್ನು ಎಲ್ಲರೂ ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲಿಯೂ ಇವು ಕಾಣಲು ಸಿಗುತ್ತಿದೆ. ಈ ಬದಲಾವಣೆ ಅನುಕೂಲಕರವಾಗಿದ್ದರೂ ಕೂಡ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ (Digestive Health) ಹಾನಿ ಮಾಡುತ್ತದೆಯೇ ಎಂಬ ಅನುಮಾನ ಹೆಚ್ಚಿನವರಲ್ಲಿ ಕಾಡುತ್ತಿದೆ. ಅದರಲ್ಲಿಯೂ ಇತ್ತೀಚೆಗೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಶೌಚಾಲಯದಲ್ಲಿ ಕುಳಿತುಕೊಳ್ಳುವ ಭಂಗಿಯಿಂದ ಈ ರೀತಿಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಇಂಡಿಯನ್ ಟಾಯ್ಲೆಟ್ ಒಳ್ಳೆಯದೇ? ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ತಜ್ಞ ಡಾ. ಸೋನಿಯಾ ರಾವತ್ ಹೇಳುವ ಪ್ರಕಾರ, ಇಂಡಿಯನ್ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಈ ಸ್ಥಾನದಲ್ಲಿ ಕುಳಿತಾಗ, ಗುದನಾಳವು ನೇರವಾಗುತ್ತದೆ. ಇದು ಯಾವುದೇ ರೀತಿಯ ಅಡಚಣೆಯಿಲ್ಲದೆ ಮಲವನ್ನು ಸುಲಭವಾಗಿ ಹೊರಹಾಕಲು ಅನುವು ಮಾಡಿಕೊಡುತ್ತದೆ. ಇದು ಕರುಳಿನ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಕರುಳನ್ನು ಸಂಪೂರ್ಣವಾಗಿ ಖಾಲಿ ಮಾಡುವುದರಿಂದ ಮಲಬದ್ಧತೆ ಸಮಸ್ಯೆಗಳನ್ನು ತಡೆಯುತ್ತದೆ. ವೆಸ್ಟರ್ನ್ ಟಾಯ್ಲೆಟ್ ಉಪಯೋಗ ಮಾಡುವುದರಿಂದಾಗುವ ಸಮಸ್ಯೆಗಳು? ಸಾಮಾನ್ಯವಾಗಿ ವೆಸ್ಟರ್ನ್ ಟಾಯ್ಲೆಟ್‌ಗಳ ಬಳಕೆ ಅನುಕೂಲಕರವಾಗಿರಬಹುದು, ಆದರೆ ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಭಂಗಿಯಲ್ಲಿ, ಗುದನಾಳವು ಸ್ವಲ್ಪ ಬಾಗುತ್ತದೆ. ಇದರಿಂದ ದೇಹಕ್ಕೆ ಕರುಳನ್ನು ಸಂಪೂರ್ಣವಾಗಿ ಖಾಲಿ ಮಾಡಲು ಕಷ್ಟವಾಗುತ್ತದೆ. ಕಾಲಾನಂತರದಲ್ಲಿ ಇದು ಮಲಬದ್ಧತೆ, ಅನಿಲ ಮತ್ತು ಮೂಲವ್ಯಾಧಿಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾರಿಗೆ ಯಾವುದು ಒಳ್ಳೆಯದು? ಇದರರ್ಥ ಎಲ್ಲರೂ ಭಾರತೀಯ ಶೌಚಾಲಯ ಅಥವಾ ಇಂಡಿಯನ್ ಟಾಯ್ಲೆಟ್ ಬಳಕೆ ಮಾಡಬೇಕು ಎಂದಲ್ಲ. ಮೊಣಕಾಲು ನೋವು, ಕೀಲು ಸಮಸ್ಯೆ ಇರುವವರಿಗೆ ಅಥವಾ ವೃದ್ಧರಿಗೆ ಪಾಶ್ಚಿಮಾತ್ಯ ಶೌಚಾಲಯಗಳು ಸುರಕ್ಷಿತ. ನೀವು ಪಾಶ್ಚಿಮಾತ್ಯ ಶೌಚಾಲಯವನ್ನು ಬಳಸುತ್ತಿದ್ದರೆ, ನಿಮ್ಮ ಪಾದಗಳ ಕೆಳಗೆ ಸಣ್ಣ ಸ್ಟೂಲ್ ಇಡುವುದರಿಂದ ನಿಮ್ಮ ಮೊಣಕಾಲುಗಳು ಮೇಲಕ್ಕೆತ್ತಲ್ಪಡುತ್ತವೆ ಮತ್ತು ನಿಮ್ಮನ್ನು ಭಾರತೀಯ ಶೌಚಾಲಯದ ಭಂಗಿಗೆ ತರುತ್ತದೆ. ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಜಂಕ್ ಫುಡ್ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಈಗಾಗಲೇ ಹೆಚ್ಚುತ್ತಿವೆ. ಅಂತಹ ಸಂದರ್ಭಗಳಲ್ಲಿ, ಸರಿಯಾದ ಶೌಚಾಲಯದ ಭಂಗಿಯನ್ನು ಆಯ್ಕೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion