• Feb 14, 2026
  • NPN Log
    ಪ್ರತಿಯೊಬ್ಬರು ಶಾಂತಿಯುತವಾಗಿ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಬಯಸುತ್ತಾರೆ. ಆದರೆ ಈ ಐದು ಬಗೆಯ ಸಮಸ್ಯೆಗಳು ಯಾರ ಜೀವನದಲ್ಲಿ ಇರುತ್ತದೆಯೋ ಅವರು ಖಂಡಿತವಾಗಿಯೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೇ ಇಲ್ಲ, ಅವರು ಯಾವಾಗಲೂ ಚಿಂತೆಯಲ್ಲಿಯೇ ಇರುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಮನುಷ್ಯನ ನೆಮ್ಮದಿ ಹಾಳಾಗಲು ಕಾರಣ ಯಾವ ವಿಚಾರಗಳು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಉಪಯುಕ್ತವಾದ ಜೀವನದ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಯಾವ ರೀತಿ ಜೀವನ ನಡೆಸಬೇಕು, ಯಶಸ್ಸಿಗಾಗಿ ಏನು ಮಾಡಬೇಕು, ನೆಮ್ಮದಿಯ ಜೀವನ ನಡೆಸಲು ಮಾಡಬೇಕಾದದ್ದೇನು ಎಂಬಿತ್ಯಾದಿ ವಿಷಯಗಳನ್ನು ತಿಳಿಸಿದ್ದಾರೆ. ಅದೇ ರೀತಿ ಅವರು ಈ ಐದು ಬಗೆಯ ಸಮಸ್ಯೆಗಳು ಯಾರ ಜೀವನದಲ್ಲಿ ಇರುತ್ತದೆಯೋ ಅವರು ಖಂಡಿತವಾಗಿಯೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಅವರು ಯಾವಾಗಲೂ ಚಿಂತೆಯಲ್ಲಿಯೇ ಮುಳುಗಿರುತ್ತಾರೆ ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಯಾವ ವಿಷಯಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುತ್ತದೆ, ಮಾನಸಿಕವಾಗಿ ದುರ್ಬಲಗೊಳಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಮನುಷ್ಯನ ನೆಮ್ಮದಿ ಹಾಳಾಗಲು ಇವೇ ಮುಖ್ಯ ಕಾರಣ: ಕಟುವಾಗಿ ಮಾತನಾಡುವ ಜನರೊಂದಿಗೆ ಇರುವುದು: ಚಾಣಕ್ಯರು ಹೇಳುವಂತೆ, ನಿರಂತರವಾಗಿ ಕಟುವಾಗಿ ಮಾತನಾಡುವ ಅಥವಾ ಇತರರನ್ನು ಅವಮಾನಿಸುವ ಜನರೊಂದಿಗೆ ಬದುಕುವುದು ತುಂಬಾ ಕಷ್ಟ. ಅವರೊಂದಿಗೆ ವಾಸಿಸುವುದರಿಂದ ಮಾನಸಿಕ ಶಾಂತಿ ಕದಡುತ್ತದೆ, ನೆಮ್ಮದಿ ಹಾಳಾಗುತ್ತದೆ. ಜೊತೆಗೆ ಪ್ರತಿಕ್ಷಣವೂ ಸಹ ನೋವಿನಿಂದಲೇ ಇರಬೇಕಾಗುತ್ತದೆ. ಹೀಗೆ ಇಂತಹ ಜನರೊಂದಿಗೆ ಇರುವವರು ಎಂದಿಗೂ ಸುಖ ಜೀವನ ನಡೆಸಲು ಸಾಧ್ಯವೇ ಇಲ್ಲ. ಭಾರೀ ಸಾಲದ ಹೊರೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಹೆಚ್ಚು ಸಾಲದಲ್ಲಿದ್ದಾಗ, ಆತ ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ, ಆತ ಸಂಪೂರ್ಣ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಾನೆ. ಆತ ಸದಾ ತನ್ನ ಸಾಲವನ್ನು ಮರುಪಾವತಿಸುವ ಆಲೋಚನೆಯಲ್ಲಿ ಮುಳುಗಿರುತ್ತಾನೆ. ಈ ಮಾನಸಿಕ ಒತ್ತಡವು ಆತನನ್ನು ಒಳಗಿನಿಂದ ಸುಡುತ್ತದೆ. ಅವಿಧೇಯ ಮಕ್ಕಳು: ಮಕ್ಕಳು ದಾರಿ ತಪ್ಪಿದರೆ ಅಥವಾ ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅಂತಹ ಮಕ್ಕಳನ್ನು ಪಡೆದ ಪೋಷಕರು ತೀವ್ರ ದುಃಖಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ತಮ್ಮ ಸ್ವಂತ ಮಕ್ಕಳಿಂದ ಉಂಟಾಗುವ ಈ ದುಃಖವು ಒಬ್ಬ ವ್ಯಕ್ತಿಯನ್ನು ಒಳಗಿನಿಂದ ಸುಡುತ್ತದೆ, ಮತ್ತು ಆ ವ್ಯಕ್ತಿಯೂ ಸದಾ ತನ್ನ ಮಗ ಅಥವಾ ಮಗಳು ನೀಡಿದಂತಹ ಆ ನೋವಿನ ಮಾತನ್ನೇ ನೆನೆಯುತ್ತಿರುತ್ತಾರೆ. ಈ ಅಂಶ ಆತನ ನೆಮ್ಮದಿಯನ್ನು ಸಹ ಹಾಳು ಮಾಡುತ್ತದೆ. ಬಡತನ ಮತ್ತು ಅವಮಾನ: ಬಡತನದ ಕಾರಣದಿಂದಾಗಿ ಸಮಾಜದಲ್ಲಿ ಯಾರಾದರೂ ಅವಮಾನಕ್ಕೊಳಗಾದಾಗ, ಅದು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಈ ಅವಮಾನವು ಮನಸ್ಸಿಗೆ ಆಳವಾಗಿ ನೋವುಂಟು ಮಾಡುತ್ತಾರೆ. ಈ ಅವಮಾನವನ್ನು ಪದೇ ಪದೇ ನೆನೆದು, ಆತ ದುಃಖ ಪಡುತ್ತಾನೆ. ಇದು ಆತನ ಸಂಪೂರ್ಣ ನೆಮ್ಮದಿಯನ್ನೇ ಹಾಳು ಮಾಡಿ ಬಿಡುತ್ತದೆ. ಮನೆಯಲ್ಲಿ ನಿರಂತರ ಜಗಳಗಳು: ಗಂಡ ಹೆಂಡತಿಯ ನಡುವೆ ಅಥವಾ ಕುಟುಂಬದೊಳಗೆ ನಿರಂತರವಾಗಿ ಜಗಳ ನಡೆಯುತ್ತಿದ್ದರೆ, ಅಂತಹ ಮನೆ ನರಕಕ್ಕೆ ಸಮಾನವಾಗಿರುತ್ತದೆ. ಅಂತಹ ಮನೆಯಲ್ಲಿ ವಾಸಿಸುವವರಿಗೆ ನೆಮ್ಮದಿ ಎಂಬುದು ಇರುವುದಿಲ್ಲ, ಈ ಅಶಾಂತಿ ಸಂಪೂರ್ಣ ಮಾನಸಿಕ ನೆಮ್ಮದಿಯನ್ನೇ ನಾಶ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion