• Feb 14, 2026
  • NPN Log
    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಗರಿಗೆದರಿದೆ.ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ಅಕ್ಷರಶಃ ಇದೀಗ ಡಿನ್ನರ್‌ ಪಾಲಿಟಿಕ್ಸ್‌ ಆಗಿದೆ. ಸಿಎಂ ಕುರ್ಚಿಯ ಅಧಿಕಾರಕ್ಕಾಗಿ ಚದುರಂಗದಾಟ ಕೈ ಪಾಳಯದಲ್ಲಿ ಜೋರಾಗಿದೆ. ಎರಡೂವರೆ ವರ್ಷಗಳಿಂದ ಸಿಎಂ ಪಟ್ಟಕ್ಕಾಗಿ ಕಾದುಕುಳಿತಿದ್ದ ಡಿ ಕೆ ಶಿವಕುಮಾರ್‌ ಗೆ ಇದೀಗ ಹಲವು ಅಸ್ತ್ರಗಳನ್ನ ಪ್ರಯೋಗಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ನಡುವಿನ ಕುರ್ಚಿ ಫೈಟ್‌ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಸದ್ಯ ಹೈಕಮಾಂಡ್‌ ಸೂಚನೆಯಂತೆ ಇಬ್ಬರು ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಮೂಲಕ ಎಲ್ಲವೂ ತಣ್ಣಗಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ಮತ್ತೆ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇನ್ನಷ್ಟು ಅನ್ವೇಷಿಸಿ ಜ್ಯೋತಿಷ್ಯ ಸೇವೆಗಳು ಉದ್ಯೋಗ ತರಬೇತಿ ಕೋರ್ಸ್‌ಗಳು ಮನರಂಜನೆ ಸುದ್ದಿ ಜಿಲ್ಲಾ ಸುದ್ದಿ ಬೆಳಗಾವಿ ಅಧಿವೇಶನದ ಬಳಿಕ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟುಕೊಡ್ತಾರೆ ಬಿಡು ಅನ್ನೋ ವಾತಾವಾರಣ ಸೃಷ್ಟಿಯಾಗಿತ್ತು, ಅದೇ ಆಸೆಯಲ್ಲೇ ಡಿಕೆ ಶಿವಕುಮಾರ್ ಕೂಡ ಇದ್ದರು. ಅವರ ಬಣವೂ ಅದನ್ನೇ ಹೇಳುತ್ತಿದ್ದರು. ಆದರೆ, ಸಿಎಂ ಪಟ್ಟದ ಚದುರಂಗದಾಟದಲ್ಲಿ ಇಡೀ ಗೇಮ್‌ ಅನ್ನೇ ಚೇಂಜ್‌ ಮಾಡಿದ್ದು ಯತೀಂದ್ರ ಸಿದ್ದರಾಮಯ್ಯ, ಅಪ್ಪನೇ 5 ವರ್ಷ ಪೂರ್ಣ ಸಿಎಂ ಆಗಿರ್ತಾರೆ ಎಂಬ ಅರ್ಥದ ಹೇಳಿಕೆ ಯತೀಂದ್ರ ಅವರಿಂದ ಬರುತ್ತಿದ್ದಂತೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಯ ಕಟ್ಟೆ ಒಡೆದಂತೆ ಕಾಣುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಬಂಡೆ, ಇದೀಗ ಸಿಎಂ ಕುರ್ಚಿಗಾಗಿ ಚದುರಂಗದಾಟು ಶುರು ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಹಾವು-ಏಣಿ ಆಟ ಎಂದರೆ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯುವ ಸ್ಪರ್ಧೆಯನ್ನು ಹಾವು-ಏಣಿ ಆಟಕ್ಕೆ ಹೋಲಿಸಲಾಗಿದೆ ಇದರಲ್ಲಿ ಗೆಲುವು-ಸೋಲು, ಏರಿಕೆ-ಪತನಗಳು, ರಾಜಕೀಯ ಮೈತ್ರಿಗಳು, ವಿಶ್ವಾಸ ಮಾತು ಹಾಗೂ ಸವಾಲುಗಳ ಮೂಲಕ ನಾಯಕರು ಸಿಎಂ ಕುರ್ಚಿ ಡಿ ಕೆ ಶಿವಕುಮಾರ್‌ ಹಲವು ಮಾರ್ಗಗಳ ಮೂಲಕ ದಾಳ ಉರುಳಿಸಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನನ್ನ ಪರ ಇದೆ, ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ರೆ, ಇತ್ತ ಡಿ ಕೆ ಶಿವಕುಮಾರ್‌ ದೇವರ ಮೊರೆ ಹೋಗಿದ್ದು, ಮುಂದಿನ ವಾರ ಹೈಕಮಾಂಡ್‌ ನಾಯಕ ಭೇಟಿಗೆ ಸಜ್ಜಾಗಿದ್ದಾರೆ. Advertisement Also Read CM vs DCM: ಕುರ್ಚಿ ಕಾಳಗ; ಹೈಕಮಾಂಡ್‌ ನಾಯಕರ ಭೇಟಿ ಬಗ್ಗೆ ಡಿ ಕೆ ಶಿವಕುಮಾರ್‌ ಹೇಳಿದ್ದೇನು? ಪವರ್ ಶೇರಿಂಗ್ ಪಾಲಿಟಿಕ್ಸ್ : ಗೊಂದಲಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಗರಿಗೆದರಿದೆ. ಸಿಎಂ ಸ್ಥಾನಕ್ಕೇರಲು ತುದಿಗಾಲಿನಲ್ಲಿ ನಿಂತಿರುವ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ನಿಂದ ಸ್ಪಷ್ಟನೆ ಪಡೆಯಲು ಶತಪ್ರಯತ್ನ ಮಾಡ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಏನೇ ಆದ್ರೂ ಸೀಟು ಬಿಟ್ಟುಕೊಡುವ ಮಾತೇ ಇಲ್ಲ ಎನ್ನುವಂತೆ ಸವಾಲ್ ಹಾಕ್ತಿದ್ದಾರೆ. ಪದೇ ಪದೇ 5 ವರ್ಷವೂ ನಾನೇ ಸಿಎಂ ಅಂತಿರೋ ಸಿದ್ದರಾಮಯ್ಯ ಈಗ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಾನು ಕೇಳ್ಬೇಕು, ಡಿಕೆನೂ ಕೇಳ್ಬೇಕು: ಸಿದ್ದರಾಮಯ್ಯ ಗರಂ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ವಿಚಾರಕ್ಕೆ ಫುಲ್ ಗರಂ ಆಗಿದ್ದಾರೆ. ಕಾಂಗ್ರೆಸ್ನಲ್ಲಿ ನಿರ್ಧಾರ ತೆಗೆದುಕೊಳ್ಳೋದು ಹೈಕಮಾಂಡ್, ಅವರು ಹೇಳಿದ್ರೆ ನಾನು ಕೇಳ್ಬೇಕು, ಡಿಕೆ ಶಿವಕುಮಾರ್‌ ನೂ ಕೇಳ್ಬೇಕು ಎಂದು ಸಿದ್ದರಾಮಯ್ಯ ಖಡಕ್ ಆಗಿ ನುಡಿದಿದ್ದಾರೆ. ನಂದೇ ಅಧಿಕಾರ, ನನ್ನದೇ ಬಜೆಟ್ ಪವರ್ ಶೇರಿಂಗ್ ವಿಚಾರ ಬಂದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೇ ನಾನೇ ಐದು ವರ್ಷವೂ ಸಿಎಂ ಅಂತ ಹೇಳ್ತಾನೆ ಬಂದಿದ್ದಾರೆ. ಯಾರ ಆಟಕ್ಕೂ ಬಗ್ಗಲ್ಲ ಎನ್ನುವ ಸಂದೇಶ ನೀಡ್ತಿದ್ದಾರೆ. ಇದೀಗ ಮತ್ತೆ ಉಳಿದ ಎರಡೂವರೆ ವರ್ಷವೂ ನಾನೇ ಸಿಎಂ ಅಂದಿದ್ದಾರೆ. ಅಲ್ಲದೇ ಮುಂದಿನ ಬಜೆಟ್ ಕೂಡ ನಾನೇ ಮಂಡಿಸುವೆ ಎಂದು ಬಹಳ ವಿಶ್ವಾಸದಿಂದಲೇ ಮಾತಾಡಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ: ಡಿ ಕೆ ಸುರೇಶ್‌ ಅಧಿಕಾರ ಹಂಚಿಕೆ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ ಎಂದ ಡಿಕೆ ಸುರೇಶ್ ಹೇಳಿದ್ದಾರೆ. ಇನ್ನೂ ಡಿ ಕೆ ಸುರೇಶ್‌ ಮಾತಿಗೆ ಸಿಎಂ ಸಮರ್ಥನೆ ನೀಡಿದ್ದು. ಹೌದು ಕೊಟ್ಟ ಮಾತು ತಪ್ಪಿಲ್ಲ . ಡಿಕೆ ಸುರೇಶ್ ಹೇಳಿದ್ದು ಈಗಲೂ ನಾನು ಗ್ಯಾರೆಂಟಿ ವಿಚಾರದಲ್ಲಿ ಮಾತು ತಪ್ಪಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ. ನನ್ನ, ಸಿಎಂ ನಡುವೆ ಒಪ್ಪಂದ ಆಗಿದೆ: ಡಿಕೆ ಶಿವಕುಮಾರ್‌ ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಯಾವತ್ತೂ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಲ್ಲ ಎಂದು ಹೇಳಿಲ್ಲ. ಹಾಗೆ ಹೈಕಮಾಂಡ್ ಕೂಡ ಅವರ ಪರವಾಗಿಲ್ಲ ಅಂತಾ ಹೇಳಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ಇದ್ದದ್ದಕ್ಕೆ ಅವರು ಸಿಎಂ ಆಗಿದ್ದಾರೆ. ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಹೇಳಿದರು. ಹೈಕಮಾಂಡ್‌ ನನ್ನ ಪರ ಇದೆ ನಾನೇ ಸಿಎಂ: ಸಿದ್ದರಾಮಯ್ಯ ಈಗಾಗಲೇ ಸಿಎಂ ಆಗಿ 5 ವರ್ಷ ಅಧಿಕಾರ ಮುಗಿಸಿದ್ದೇನೆ, ಎರಡನೇ ಬಾರಿ ನಾನು ಸಿಎಂ ಇದ್ದೇನೆ. ನನ್ನ ಪ್ರಕಾರ ಹೈಕಮಾಂಡ್‌ನವರು ನನ್ನ ಪರವಾಗಿಯೇ ಇರೋದು. ಅವರು ಹೇಳಿದಂತೆ ನಡೆದುಕೊಳ್ಳೋನು ನಾನು. ಹೀಗಾಗಿ, ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಆಗಿರುತ್ತೇನೆ. ಈಗ ಎರಡೂವರೆ ವರ್ಷ ಆಗಿದೆ, ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion