• Feb 14, 2026
  • NPN Log
    ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿದೆ. ತನ್ನ ಮಕ್ಕಳು ತನಗಿಂತ ಉತ್ತಮ ಜೀವನ ನಡೆಸಬೇಕೆಂಬ ಆಸೆ ಎಲ್ಲ ಅಮ್ಮಂದಿರಿಗೂ ಇರುತ್ತದೆ. ಅದಕ್ಕಾಗಿ ತಾಯಿ ಎಂತಹ ತ್ಯಾಗಕ್ಕೆ ಬೇಕಾದರೂ ಸಿದ್ಧರಾಗಿರುತ್ತಾರೆ. ಆದರೆ, ಆಂಧ್ರ ಪ್ರದೇಶದಲ್ಲಿ 2 ಲಕ್ಷ ರೂ. ಹಣದ ಆಸೆಗೆ ತನ್ನ 14 ವರ್ಷದ ಮಗಳನ್ನು 54 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವ ತಾಯಿ ಮಗಳನ್ನು ಆತನ ಜೊತೆ ಮದುವೆ ಮಾಡಿಕೊಟ್ಟಿದ್ದಾಳೆ. ಹೈದರಾಬಾದ್, ಫೆಬ್ರವರಿ 10: ಆಂಧ್ರಪ್ರದೇಶದ (Andhra Pradesh) ಅಣ್ಣಮಯ್ಯ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಯಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 2 ಲಕ್ಷ ರೂ.ಗೆ ತಾಯಿ ತನ್ನನ್ನೇ ನಂಬಿಕೊಂಡಿದ್ದ ಮಗಳ ಜೀವನವನ್ನೇ ಹಾಳು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುಂಗನೂರಿನ ಬೀಡಿ ಕಾಲೋನಿಯ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರಾಜಶೇಖರ್ ರೆಡ್ಡಿ ಎಂಬ 54 ವರ್ಷದ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಬೀಡಿ ಕಾಲೋನಿಯಲ್ಲಿ ವಾಸಿಸುವ ರಾಮರಾಜು ಹಾಗೂ ಶೋಭಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಶೋಭಾ ತನ್ನ ಹಿರಿಯ ಮಗಳನ್ನು ಹಣದ ಆಸೆಗೆ ಮಾರಿದ್ದಾಳೆ. ರಾಮರಾಜು ಮತ್ತು ಶೋಭಾ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಪತಿ ರಾಮರಾಜು ಜೊತೆಗಿನ ಜಗಳದ ನಂತರ ಶೋಭಾ 2 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಪುಂಗನೂರಿನ ಟಿಡ್ಕೊ ಮನೆಗಳಲ್ಲಿ ವಾಸಿಸುವ ಶೋಭಾ, ರೆಡ್ಡೆಪ್ಪ ಎಂಬ ಮಧ್ಯವರ್ತಿಯ ಮೂಲಕ ತನ್ನ ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದಳು. ಇದಕ್ಕಾಗಿ ಪ್ಲಾನ್ ಮಾಡಿದ ಆಕೆ ನೋಡಬೇಕೆಂದು ಆಸೆಯಾಗುತ್ತಿದೆ ಎಂದು ಹೇಳಿ ತನ್ನ ಹಿರಿಯ ಮಗಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಕರ್ನಾಟಕದ ಕೋಲಾರ ಜಿಲ್ಲೆಯ ರಾಯಲ್ಪಡುವಿನ 54 ವರ್ಷದ ರಾಜಶೇಖರ್ ರೆಡ್ಡಿ ಎರಡನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದ ವಿಷಯ ತಿಳಿದ ಆಕೆ ರೆಡ್ಡಪ್ಪ ಮೂಲಕ 2 ಲಕ್ಷ ರೂ.ಗೆ ಒಪ್ಪಂದ ಕುದುರಿಸಿದ್ದಳು. 2 ಲಕ್ಷ ಕೊಟ್ಟು ಆ ಬಾಲಕಿಯನ್ನು ರಾಜಶೇಖರ್ ಎರಡನೇ ಮದುವೆಯಾಗಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ ಒಪ್ಪಂದದ ಪ್ರಕಾರ ಶೋಭಾಗೆ ಹಣ ನೀಡಿ 10 ದಿನಗಳ ಹಿಂದೆ ಬೆಂಗಳೂರಿನಲ್ಲಿ ಆ ಹುಡುಗಿಯನ್ನು ಮದುವೆಯಾದ ರಾಜಶೇಖರ್ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋದರು. ನಂತರ, ರಾಜಶೇಖರ್ ಅಪ್ರಾಪ್ತ ಬಾಲಕಿಯನ್ನು ಚಿತ್ರಹಿಂಸೆ ನೀಡಿದ್ದು, ಆಕೆಗೆ ಅದು ಸಹಿಸಲಾಗಲಿಲ್ಲ. ಇದರ ಪರಿಣಾಮವಾಗಿ, ಆ ಹುಡುಗಿ ತನ್ನ ಅಣ್ಣನಿಗೆ ಫೋನ್ ಮೂಲಕ ಮಾಹಿತಿ ನೀಡಿದಳು. ನಂತರ, ತನ್ನ ಅಣ್ಣನ ಸಹಾಯದಿಂದ ಅವಳು ಪುಂಗನೂರನ್ನು ತಲುಪಿದಳು. ಬಳಿಕ ಈ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಯಿತು. ಆ ಬಾಲಕಿಯನ್ನು ಐಸಿಡಿಎಸ್ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡರು. ಕರ್ನಾಟಕದಲ್ಲಿ ನಡೆದ ಘಟನೆ ಎಂದು ಪರಿಗಣಿಸಿ ಪುಂಗನೂರು ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಸೂಕ್ತ ಆರೈಕೆ ನೀಡಲು ಬಾಲಕಿಯನ್ನು ಐಸಿಡಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಐಸಿಡಿಎಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಪೋಷಕರಿಗೆ ಕೌನ್ಸೆಲಿಂಗ್ ನಡೆಸಿದ ಐಸಿಡಿಎಸ್ ಸಿಬ್ಬಂದಿ, ಮುಂದೆ ವಿದ್ಯಾಭ್ಯಾಸ ಮಾಡಲು ಬಯಸುವ ಆ ಹುಡುಗಿಯ ಕನಸನ್ನು ನನಸಾಗಿಸಲು ಕ್ರಮ ಕೈಗೊಂಡರು. ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು ಆ ಬಾಲಕಿಗೆ ಅಧ್ಯಯನ ಮಾಡಲು ವ್ಯವಸ್ಥೆ ಮಾಡುವುದಾಗಿ ಹೇಳಿದರು. ಪುಂಗನೂರಿನ ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿದ ತಾಯಿಯ ನಡವಳಿಕೆಯ ಬಗ್ಗೆ ಐಸಿಡಿಎಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಹೇಳಿದ ತಾಯಿ ಶೋಭಾ ಅವರನ್ನು ವಿಚಾರಣೆ ನಡೆಸಿ ವಿವರಗಳನ್ನು ಸಂಗ್ರಹಿಸಿದ್ದಾರೆ. ತನ್ನ ಪತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಮನೆಯಿಂದ ಹೊರಬಂದಿದ್ದೇನೆ ಎಂದು ಹೇಳಿದ್ದ ಶೋಭಾ ತಿಳಿಯದೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion